ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಇಂದು ಕಷ್ಣ ಭಟ್ಟರ ಸ್ಮರಣೆ: ಸನ್ಮಾನ, ತಾಳಮದ್ದಳೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಮಾರ್ಚ್ 14 , 2015
ಮಾರ್ಚ್ 14, 2015

ಇಂದು ಕಷ್ಣ ಭಟ್ಟರ ಸ್ಮರಣೆ: ಸನ್ಮಾನ, ತಾಳಮದ್ದಳೆ

ಶಿರಸಿ : ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ಯಕ್ಷಗಾನ ಕಲಾ ಪ್ರೌಢಿಮೆಯ ಮೂಲಕ ಛಾಪು ಮೂಡಿಸಿದ್ದ ಮತ್ತು ತೆರೆಮರೆಯಲ್ಲಿದ್ದು ಅನೇಕ ಸಾಮಾಜಿಕ ಕೆಲಸಕಾರ್ಯಗಳಲ್ಲಿ ತಮ್ಮ ಕೊಡುಗೆ ನೀಡಿದ್ದ ದಿ. ಕೆರೆಕೆ ಕಷ್ಣ ಭಟ್ಟರ ಸಂಸ್ಮರಣ ಕಾರ್ಯಕ್ರಮವು ನಗರದ ಟಿಎಂಎಸ್ ಸಭಾಭವನದಲ್ಲಿ ಮಾ.14 ರಂದು ಸಂಜೆ 4ಕ್ಕೆ ಏರ್ಪಾಟಾಗಿದೆ.

ಸಂಸ್ಮರಣ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರೂ ಆಗಿರುವ ಹೆಸರಾಂತ ಹರಿದಾಸ ನಿವಣೆ ಗಣೇಶ ಭಟ್ಟ ಮತ್ತು ಕಲಾವಿದ ಹಾಗೂ ಸಂಘಟಕ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಅಶೋಕ ಭಟ್ಟ ಅವರನ್ನು ಸನ್ಮಾನಿಸಲಾಗುತ್ತದೆ. ಅಲ್ಲದೇ ಅಂದು ಸಮರ ಪರಶುರಾಮ ಆಖ್ಯಾನದ ತಾಳಮದ್ದಳೆ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ.

ಹೆಸರಾಂತ ವಿದ್ವಾಂಸ ಹಾಗೂ ಯಕ್ಷಗಾನ ಕಲಾವಿದರಾದ ವಿ. ಉಮಾಕಾಂತ ಭಟ್ ಕೆರೆಕೆ ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ನಲವತ್ತೆದು ವರ್ಷಗಳ ಕಾಲ ಯಕ್ಷಗಾನ ಕಲೆಯ ಮೂಲಕ ಯಕ್ಷಗಾನ ಕಲೆಯ ಮೂಲಕ ಪೌರಾಣಿಕ ಆವರಣವನ್ನು ನಿರ್ಮಿಸುವಲ್ಲಿ ಅಗ್ರಗಣ್ಯರಾಗಿದ್ದ ದಿ. ಕಷ್ಣ ಭಟ್ಟರು ಬಹುಮುಖ ಪ್ರತಿಭೆ ಪಾಂಡಿತ್ಯ ಹೊಂದಿದವರಾಗಿದ್ದರು. ನಾಟಕ ಕಲಾವಿದನಾಗಿ, ಕಾವ್ಯ ಗಮಕ ವ್ಯಾಖ್ಯಾನಕಾರನಾಗಿದ್ದು ಪಾರಂಪರಿಕ ನಾಟಿ ವೆದ್ಯದಲ್ಲೂ ಪಳಗಿದ್ದರು. ಸಾಮಾಜಿಕ ಕಾರ್ಯದಲ್ಲಿ ಎಲೆಮರೆಯ ಕಾಯಿಯಂತೆ ಇರುತ್ತಿದ್ದ ಅವರನ್ನು ನೆನಪಿಸಿಕೊಳ್ಳಲು ಸಂಸ್ಮರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅವರು ತೀರಿಕೊಂಡು ಹತ್ತು ವರ್ಷಗಳಾಗಿದ್ದು ಪ್ರತಿ ವರ್ಷ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಲಾಗುತ್ತಿದೆ. ಕಷ್ಣ ಭಟ್ಟರಿಗೆ ಆತ್ಮೀಯರೂ ಆಗಿದ್ದ ನಿವಣೆ ಗಣೇಶ ಭಟ್ಟರು ಮತ್ತು ಉಜಿರೆ ಅಶೋಕ ಭಟ್ಟ ಅವರನ್ನು ಸನ್ಮಾನಿಸಲಾಗುತ್ತಿದೆ ಹಿರಿಯ ಸಹಕಾರಿ ಮುಂದಾಳು ಜಿ.ಎಂ.ಹೆಗಡೆ ಹುಳಗೋಳ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದರು.

ತಾಳಮದ್ದಳೆ ಮಾ. 14ರ ಸಂಜೆ ತಾಳಮದ್ದಳೆ ಕಲಾಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ. ಹಿಮ್ಮೇಳದಲ್ಲಿ ನೆಬ್ಬೂರು ನಾರಾಯಣ ಭಾಗವತರು ಮತ್ತು ವಿ.ಗಣಪತಿ ಭಟ್ಟ ಸಾಲಿಗ್ರಾಮ, ಮದ್ದಳೆಕಾರರಾಗಿ ಶಂಕರ ಭಾಗವತ ಪಾಲ್ಗೊಳ್ಳುವರು. ಸಮರ ಪರಶುರಾಮ ಆಖ್ಯಾನದ ಅರ್ಥಧಾರಿಗಳಾಗಿ ನಿವಣೆ ಗಣೇಶ ಭಟ್ಟರು ಕಾರ್ತವೀರ್ಯನಾಗಿ, ಉಜಿರೆ ಅಶೋಕ ಭಟ್ಟರು ಜಮದಗ್ನಿಯಾಗಿ, ಪ್ರೊ.ಎಂ.ಎ.ಹೆಗಡೆ ದಂಟಕಲ್ ಪರಶುರಾಮ ಮತ್ತು ಉಮಾಕಾಂತ ಭಟ್ಟ ಕೆರೇಕೆ ಪಾತ್ರ ನಿರ್ವಹಿಸಲಿದ್ದಾರೆ.



ಕೃಪೆ : http://vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ